ತುಮಕೂರು,ಏ 06 (MSP):’ಮಾಜಿ ಪ್ರಧಾನಿ ದೇವೇಗೌಡರು ಅವರ ಮಕ್ಕಳಿಗೋಸ್ಕರ ಅವರದೇ ಜಾತಿಯವರ ಹಲವರನ್ನು ಮುಗಿಸಿದ್ದಾರೆ ’ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜು ಗಂಭೀರ ಆರೋಪ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಸವರಾಜು, ಗೌಡರು ಅವರ ಮಕ್ಕಳಿಗಾಗಿ ಅವರದ್ದೇ ಜಾತಿಯವರ ಬಹಳಷ್ಟು ಜನರನ್ನು ಮುಗಿಸಿದ್ದಾರೆ. ವೈ.ಕೆ.ರಾಮಯ್ಯ,ನಂಜೇಗೌಡರು, ಪುಟ್ಟಸ್ವಾಮಿ ಹೀಗೆ ಮುಂತಾದವರನ್ನು ಮುಗಿಸಿದ್ದಾರೆ. ಅವರ ಅವರ ಕುಮ್ಮಕ್ಕಿಲ್ಲದೆ ಹತ್ಯೆಗಳು ನಡೆಯುತ್ತವೆಯಾ?ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರು ಅವರ ಜಾತಿಯಲ್ಲಿ ಯಾರನ್ನೂ ಮೇಲೆ ಬರಲು ಬಿಟ್ಟಿಲ್ಲ. ಇನ್ನು ಅಪ್ಪಿ ತಪ್ಪಿ ದೇವೇಗೌಡರು ಕಣ್ಣು ಬಿದ್ದು ಅಂಥವರ ಹೆಗಲ ಮೇಲೆ ಕೈ ಇಟ್ರೆ ಅವರ 7 ವರ್ಷ ಭವಿಷ್ಯದ ಮುಗಿದುಹೋಯಿತು ಎಂದರ್ಥ ಎಂದು ಆರೋಪಿಸಿದ್ದಾರೆ
ಲೋಕಸಭೆ ಚುನಾವಣೆಯ ಕಾವು ಏರುತ್ತಿದ್ದಂತೆ ಇತ್ತಂಡಗಳ ನಾಯಕರ ಪರಸ್ಪರ ವಾಕ್ ಸಮರ ಜೋರಾಗಿದ್ದು, ತುಮಕೂರು ಕ್ಷೇತ್ರ ಇದೀಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಮತ್ತು ಬಿಜೆಪಿಯ ಬಸವರಾಜು ನಡುವೆ ಜಿದ್ದಾಜಿದ್ದಿನ ರಣಕಣ ಮಾರ್ಪಟ್ಟಿದೆ.