ಬೆಂಗಳೂರು, ಆ 11 (DaijiworldNews/HR): 15% ಕಮೀಷನ್ ನಾನು ಕೇಳಿದ್ದೇನೆ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಬೊಮ್ಮಾಯಿ, ಅಶೋಕ್ ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ. 5 ಸಾವಿರ ಕೋಟಿ 3 ಸಾವಿರ ಕೋಟಿ ಬಿಲ್ ಏಕೆ ಉಳಿಸಿಕೊಂಡ್ರಿ. ನಿಮ್ಮ ಅವಧಿಯಲ್ಲಿ ಏಕೆ ಬಿಲ್ ನಿಲ್ಲಿಸಿದ್ರಿ? ಮುಖ್ಯಮಂತ್ರಿಗಳು ಕೆಂಪಣ್ಣ ನೈಜತೆ ನೋಡಿದ್ದಾರೆ. ಕೆಂಪಣ್ಣ ನಮ್ರತೆಯಿಂದ ಮನವಿ ಮಾಡಿಕೊಂಡ್ರು. ಐಎಎಸ್ ಆಫೀಸರ್ ನೇತೃತ್ವದಲ್ಲಿ ಕಮಿಟಿ ಏರ್ಪಡಿಸಲಾಗಿದೆ. ಈಗ ಯಾಕೆ ಅವಸರ ಮಾಡ್ತಿದ್ದಾರೆ?. ಯಾಕೆ ನೀವು ಬಿಲ್ ಕೊಡಲಿಲ್ಲಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲಿಗೆ ಪ್ರತಿಕ್ರಿಯಿಸಿದ ಡಿಕೆಶಿ, ರಸ್ತೆಯಲ್ಲಿ ಹೋಗುವವರ ಪ್ರಶ್ನೆಗೆಲ್ಲ ಉತ್ತರ ಕೊಡಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.