ಬೆಂಗಳೂರು, ಆ 11(DaijiworldNews/MS): ಈ ರಾಜ್ಯದಲ್ಲಿ ಸಿಎಂ ಮತ್ತು ಸೂಪರ್ ಸಿಎಂ ಆಳ್ವಿಕೆ ನಡೆಯುತ್ತಿದ್ದು ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ 65% ಕಮಿಷನ್ ಕೇಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ದ ಕುಟುಕಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಸಹಿಸದೇ ಇದ್ದರೆ, ತಕ್ಷಣ ಮಧ್ಯಪ್ರವೇಶಿಸಿ ಇದನ್ನು ತಡೆದು ರಾಹುಲ್ ಗಾಂಧಿಯವರು ತಮ್ಮ ಪ್ರಮಾಣಿಕತೆಯನ್ನು ತೋರಿಸಿಕೊಡಬೇಕು ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಹೆಸರಿಗೆ ಮಾತ್ರ ಡೆಪ್ಯುಟಿ ಸಿಎಂ. ಆದರೆ, ನಿಜವಾಗಿಯೂ ಡಿಕೆಶಿ ಸೂಪರ್ ಸಿಎಂ. ಡಿಸಿಎಂ ಅಧಿಕಾರ ವ್ಯಾಪ್ತಿ ಮೀರಿ ಸೂಪರ್ ಸಿಎಂ ಆದೇಶ ಮಾಡುತ್ತಿದ್ದಾರೆ . ಬಿಬಿಎಂಪಿ ಅಧಿಕಾರಿಗಳ ಟ್ರಾನ್ಸ್ಫರ್ ತನ್ನ ಗಮನಕ್ಕೆ ತಂದು ಮಾಡಬೇಕು ಎಂದು ಡಿಕೆಶಿ ಹೇಳಿದ್ದಾರೆ. ಹೀಗಾಗಿ ಡಿ. ಕೆ.ಶಿವಕುಮಾರ್ ಸೂಪರ್ ಸಿಎಂ ಎಂದು ಇದೇ ವೇಳೆ ಟೀಕಿಸಿದರು.