ನವದೆಹಲಿ, ಆ 11(DaijiworldNews/MS): ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವರ್ಷ ಪ್ರಧಾನಿ ಮೋದಿ ಅವರು ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನ ಆರಂಭಿಸಿದ್ದು, ಇದನ ಸವಿನೆನಪಿಗಾಗಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು , ಶುಕ್ರವಾರ ರಾಜ್ಯರಾಜಧಾನಿಯಲ್ಲಿರುವ ಪ್ರಗತಿ ಮೈದಾನದಿಂದ 'ಹರ್ ಘರ್ ತಿರಂಗ' ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ರ್ಯಾಲಿಯಲ್ಲಿ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ , ಅನುರಾಗ್ ಠಾಕೂರ್ , ಶೋಭಾ ಕರಂದ್ಲಾಜೆ, ಪಿಯೂಷ್ ಗೋಯಲ್ ಮತ್ತಿತರರು ಭಾಗವಹಿಸಿದ್ದರು.
ರ್ಯಾಲಿಯು ಮುಂದೆ ಸಾಗುತ್ತಿದ್ದಂತೆ , ನೆರೆದವರು "ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗಿದರು.
ಪ್ರಗತಿ ಮೈದಾನದಲ್ಲಿ ಆರಂಭವಾದ ಬೈಕ್ ರ್ಯಾಲಿ ಇಂಡಿಯಾ ಗೇಟ್ ವೃತ್ತ ತಲುಪಿ ಅಲ್ಲಿಂದ ಇಂಡಿಯಾ ಗೇಟ್ ಕಾಂಪ್ಲೆಕ್ಸ್ ವೃತ್ತಕ್ಕೆ ತೆರಳಿ ಬಳಿಕ ಕರ್ತವ್ಯ ಪಥಕ್ಕೆ ಬಂದು, ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ರ್ಯಾಲಿ ಕೊನೆಗೊಂಡಿದೆ.