ಯಾದಗಿರಿ, ಆ 11 (DaijiworldNews/HR): ಅಂಗನವಾಡಿಯೊಂದರ ಮೇಲ್ಛಾವಣಿ ಕುಸಿದ ಪರಿಣಾಮ 10 ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳಿಗೆ ಗಾಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದಾಗಲೇ ಮೇಲ್ಛಾವಣಿ ಕುಸಿದಿದ್ದು ಈ ವೇಳೆ ಅಲ್ಲೇ ಕೆಳಗಿದ್ದ ಮಗುವಿನ ತಲೆ ಮೇಲೇ ಬಿದ್ದ ಪರಿಣಾಮ 10 ತಿಂಗಳ ಮಗು ಕೀರ್ತಿ ತಲೆಗೆ ಗಾಯವಾಗಿದೆ.
ಇನ್ನು ಮಗುವಿಗೆ ಗಾಯವಾದ ಸ್ಥಳಕ್ಕೆ ಮದ್ದನ್ನು ಹಚ್ಚಿ ಬ್ಯಾಂಡೇಜ್ ಹಾಕಿದ ಮೇಲೆ ಮಗು ನಗುತ್ತಿರುವು ಎಲ್ಲರ ಗಮನಸೆಳೆದಿದೆ.
ಈ ಸಂದರ್ಭ ಅಂಗನವಾಡಿಯಲ್ಲೇ ಇದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.