ಹೊಸದೆಹಲಿ,ಏ05:ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ಹಯ್ಯ ಕುಮಾರ್ ಅವರ ಪ್ರಚಾರಕ್ಕಾಗಿ ಕ್ರೌಂಡ್ ಫಂಡಿಂಗ್ ಮೂಲಕ 70 ಲಕ್ಷ ರೂ. ಸಂಗ್ರಹಿಸಲಾಗಿದೆ.
ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕನ್ಹಯ್ಯ ಕುಮಾರ್ ಅವರು ಕಣಕ್ಕಿಳಿದಿದ್ದಾರೆ. ಅವರಿಗೆ ಕ್ರೌಂಡ್ ಫಂಢಿಂಗ್ ಮೂಲಕ 70 ಲಕ್ಷ ರೂ ಸಂಗ್ರಹವಾಗಿದೆ.
ಆರ್ಥಿಕವಾಗಿ ಶಕ್ತರಲ್ಲದವರು ಆಸಕ್ತರಿಂದ ವೆಬ್ ಸೈಟೊಂದರ ಮುಖಾಂತರ ಹಣ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ 'ಕ್ರೌಂಡ್ ಫಂಡಿಂಗ್' ಎಂದು ಹೇಳುತ್ತಾರೆ.
ಕ್ರೌಂಡ್ ಫಂಡಿಂಗ್ ಮೂಲಕ ಭಾರೀ ಮೊತ್ತವನ್ನು ಜನರೇ ಅಭ್ಯರ್ಥಿಯೋರ್ವರಿಗೆ ಸಂಗ್ರಹಿಸಿದ್ದು ಇದೇ ಮೊದಲ ಬಾರಿಯಾಗಿದ್ದು, ಈ ಬಗ್ಗೆ ಸ್ವತಃ ಕನ್ಹಯ್ಯ ಫೇಸ್ ಬುಕ್ ಪೋಸ್ಟ್ ಮಾಡಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಕ್ರೌಂಡ್ ಫಂಡಿಂಗ್ ಆರಂಭಿಸಿದಾಗ ಕನ್ಹಯ್ಯ ಕುಮಾರ್ ಅವರ ಗುರಿ 70 ಲಕ್ಷ ರೂ.ಗಳನ್ನು ಸಂಗ್ರಹಿಸುವುದಾಗಿತ್ತು. ಆದರೆ 'ಕ್ರೌಂಡ್ ಫಂಡಿಂಗ್' ಮೂಲಕ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಅವರ ವೆಬ್ ಸೈಟ್ ಮೇಲೆ ಸೈಬರ್ ಅಟ್ಯಾಕ್ ನಡೆಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕನ್ಹಯ್ಯ, "ಇದು ಸರಕಾರಿ ಷಡ್ಯಂತ್ರ ಎಂದು ನಾನು ಹೇಳುತ್ತಿಲ್ಲ. ಆದರೆ ನನ್ನ ವೆಬ್ ಸೈಟ್ ಮೇಲೆ ನಿರಂತರ ದಾಳಿ ನಡೆಯುತ್ತಿದೆ" ಎಂದವರು ಹೇಳಿದ್ದರು.