ಮೈಸೂರು, ಆ 10 (DaijiworldNews/HR): ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ ಬರೋಬ್ಬರಿ 5.48 ಲಕ್ಷ ರೂ. ದೋಚಿರುವ ಘಟನೆ ಮೈಸೂರಿನ ಯಾದವಗಿರಿ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ವಿದ್ಯುತ್ ಬಿಲ್ ಬಾಕಿ ಇದ್ದು, ಲಿಂಕ್ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ.
ಇನ್ನು ಕರೆ ಕಡಿತಗೊಳಿಸಿದ ಬಳಿಕ ಕಣ್ಣನ್ ಅವರ ಫೋನ್ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದಾರೆ. ಅದರಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ.
ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಕಣ್ಣನ್ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.