ಬೆಂಗಳೂರು, ಆ 10(DaijiworldNews/MS): ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಚಿವರಾಗಿ ಇನ್ನೂ 3 ತಿಂಗಳು ಕಳೆದಿಲ್ಲ. ಅವರ ವಿರುದ್ದ ಆರೋಪಗಳ ಸುರಿಮಳೆಯೇ ಕೇಳಿಬರುತ್ತಿದೆ. ಕೆ ಎಸ್ ಆರ್ ಟಿಸಿ ಬಸ್ ಡ್ರೈವರ್ ಆತ್ಮಹತ್ಯೆ ಯತ್ನದ ಕೇಸ್ನಲ್ಲಿ ಸಚಿವರ ಹೆಸರು ಕೇಳಿಬಂದಿತ್ತು. ಇದೀಗ ಸಹಾಯಕ ಕೃಷಿ ನಿರ್ದೇಶಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಸಖತ್ ಸದ್ದು ಮಾಡುತ್ತಿದೆ. ಇದೀಗ ರಾಜಕೀಯ ಸಂಚಲನ ಮೂಡಿಸುತ್ತಿದ್ದು ಇದರ ಬೆನ್ನಲ್ಲೇ ಬಿಜೆಪಿಯೂ ತನ್ನ ಹೋರಾಟ ಆರಂಭಿಸಿದೆ.
ಬಿಜೆಪಿ ವಿರುದ್ದ ಪೇ ಸಿಎಂ ಅಭಿಯಾನ ಮಾಡಿ ಭ್ರಷ್ಟಾಚಾರದ ವಿರುದ್ದ ಹೋರಾಡಿದ್ದ ಕಾಂಗ್ರೆಸ್ ಗೆ ಈಗ ಬಿಜೆಪಿಯು ಅದೇ ಅಸ್ತ್ರವನ್ನು ತಿರುಗುಬಾಣವಾಗಿ ಬಿಟ್ಟಿದೆ.
ಸಚಿವ ಚೆಲುವರಾಯಸ್ವಾಮಿ ವಿರುದ್ದ ಕೇಳಿ ಬಂದ ಭ್ರಷ್ಟಾಚಾರದ ಆರೋಪದ ಬೆನ್ನಲೇ ಬಿಜೆಪಿಯೂ "ಪೇ ಸಿಎಸ್" ಅಭಿಯಾನ ಕೈಗೊಂಡಿದೆ.
ಚೆಲುವರಾಯಸ್ವಾಮಿ ಪೋಟೋ ಸಹಿತ ಕ್ಯೂ ಆರ್ ಕೋಡ್ ಇರುವ ಪೋಸ್ಟರ್ ಕ್ರಿಯೇಟ್ ಮ್ನಾಡಿ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ದ ಹೋರಾಟ ಆರಂಭಿಸಿದೆ. ಬಿಜೆಪಿ ತಿರುಗೇಟಿಗೆ ಕಾಂಗ್ರೆಸ್ ತಂತ್ರವೇನು ಅನ್ನುವುದು ಕುತೂಹಲ ಕೆರಳಿಸಿದೆ.