ತಿರುವನಂತಪುರಂ, ಆ 09(DaijiworldNews/AK): ಕೇರಳದಲ್ಲಿನ ಆಡಳಿತಾರೂಢ ಎಡರಂಗ ಸರ್ಕಾರವು ಬುಧವಾರ ಕೇರಳವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ ಎಂದು ಪಿಟಿಐ ತಿಳಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನ ಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಲು ಮುಂದಾಗಿದ್ದು, ಈ ನಿರ್ಣಯವು ಆಗಸ್ಟ್ 9ರ ಇಂದು ಸದನ ಕಲಾಪಗಳ ವೇಳಾಪಟ್ಟಿಯಲ್ಲಿ ನಮೂದಾಗಿದೆ. ಈ ಮಾಹಿತಿಯು ಕೇರಳ ರಾಜ್ಯ ವಿಧಾನಸಭೆಯ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಆಗಿದೆ.
ಕೇರಳ ರಾಜ್ಯದ ಹೆಸರು ‘ಕೇರಳಂ’ ಎಂದು ಸಂವಿಧಾನ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಮರುನಾಮಕರಣಗೊಳ್ಳಬೇಕು ಎಂಬವುದು ಕೇರಳ ಸರ್ಕಾರದ ಬೇಡಿಕೆಯಾಗಿದೆ.