ನವದೆಹಲಿ, ಆ 08 (DaijiworldNews/AK): ಲೋಕಸಭೆಯಲ್ಲಿ ಪ್ರತಿಪಕ್ಷದ ಪ್ರಮುಖ ಸದಸ್ಯ ಗೌರವ್ ಗೊಗೊಯ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.
ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಗೊಗೊಯ್, ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನದ ಪ್ರತಿಜ್ಞೆಯನ್ನು ಮುರಿಯಲು ಅವಿಶ್ವಾಸ ನಿರ್ಣಯವನ್ನು ತರಲು ಮುಂದಾಯಿತು. ಒಂದು ಭಾರತ ಮಾತನಾಡುವ ಸರಕಾರ ಎರಡು ಮಣಿಪುರಗಳನ್ನು ಸೃಷ್ಟಿಸಿದೆ . ಒಂದಷ್ಟು ಜನರು ಬೆಟ್ಟಗಳಲ್ಲಿ ಇನ್ನೊಂದಷ್ಟು ಜನರು ಕಣಿವೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಗೊಗೊಯ್ ಆರೋಪಿಸಿದರು.
ಮಣಿಪುರದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಒತ್ತಾಯದಿಂದ ಈ ನಿರ್ಣಯವನ್ನು ಮಂಡಿಸಲಾಗಿದೆ ಎಂದು ಒತ್ತಿ ಹೇಳಿದ ಗೊಗೊಯ್, ಮಣಿಪುರ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಧಾನಿ ಮೋದಿಯವರ ಕಾರ್ಯವೈಖರಿ ಕೊರತೆಯಿದೆ ಎಂದರು.
ಇಂತಹ ಕ್ರಮ ಮಣಿಪುರದ ಜನರಿಗೆ ಒಂದು ಭರವಸೆಯ ಸಂದೇಶವನ್ನು ನಿಡುತ್ತದೆ. ಆದರೆ ಈ ವಿಚಾರದಲ್ಲಿ ಪ್ರಧಾನಿ ಮೌನ ವಹಿಸಿದ್ದು, ಆ ಮೌನವನ್ನು ಮುರಿಯುವ ಮಾರ್ಗವಾಗಿ ಪ್ರತಿಪಕ್ಷಗಳು ಈ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿವೆ ಎಂದು ಹೇಳಿದರು.