ಚೆನ್ನೈ, ಆ 08 (DaijiworldNews/AK): ಭಾರತಕ್ಕೆ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಇದೇ ವರ್ಷ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ತಮಿಳುನಾಡಿನ ಕಟ್ಟುನಾಯಕನ್ ಬುಡಕಟ್ಟಿಗೆ ಸೇರಿದ ಬೊಮ್ಮನ್ ಬೆಳ್ಳಿ ಎಂಬ ಮಧ್ಯವಯಸ್ಕ ದಂಪತಿಗಳು ಆನೆ ಮರಿಯನ್ನು ತಮ್ಮ ಮಗುವಿನಂತೆ ಸಾಕುವ ಹೃದಯಸ್ಪರ್ಶಿ ಸಂಬಂಧವನ್ನು ಎಲಿಫೆಂಟ್ ವಿಸ್ಪರರ್ಸ್ ಎಂಬ ಸಾಕ್ಷ್ಯಚಿತ್ರದಲ್ಲಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಸುಂದರವಾಗಿ ಚಿತ್ರಿಸಿದ್ದರು.
ಈ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿರೋದು ಭಾರತದ ಪಾಲಿಗೆ ನಿಜಕ್ಕೂ ಹೆಮ್ಮೆ ತರುವ ವಿಚಾರವಾಗಿತ್ತು . ಇದರಿಂದ ಭಾರತದ ಜನಪ್ರಿಯತೆ ವಿಶ್ವಮಟ್ಟಕ್ಕೆ ಹಬ್ಬಿದೆ. ಆದರೆ ಈಗ ಬೊಮ್ಮನ್, ಬೆಲ್ಲಿ ದಂಪತಿ ಎಲಿಫೆಂಟ್ ವಿಸ್ಪರರ್ಸ್ ನಿರ್ದೇಶಕರಿಗೆ 2 ಕೋಟಿ ಪರಿಹಾರ ಕೋರಿ ನೋಟಿಸ್ ನೀಡಿದ್ದಾರೆ.
ಚಿತ್ರ ನಿರ್ಮಾಣದ ಸಮಯದಲ್ಲಿ ನಿರ್ಮಾಪಕಿ ಬೊಮ್ಮನ್ ಮತ್ತು ಬೆಲ್ಲಿ ದಂಪತಿಗಳಿಗೆ ಹಣಕಾಸಿನ ಸಹಾಯದ ಜೊತೆಗೆ ಬೆಲ್ಲಿ ಅವರ ಮೊಮ್ಮಗಳ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಅವರು ತಾನೂ ನೀಡಿದ ಭರವಸೆ ಇರಲಿ ಚಿತ್ರದಿಂದ ಗಳಿಸಿದ ಅಗಾದ ಲಾಭದಲ್ಲಿ ಒಂದು ಭಾಗವನ್ನು ನೀಡಲು ಕೂಡ ನಿರಾಕರಿಸುತ್ತಿದ್ದಾರೆ ಎಂದು ಮಾವುತ ದಂಪತಿಗಳ ಪರ ವಕೀಲ ಪಿಟಿಐಗೆ ತಿಳಿಸಿದ್ದಾರೆ.
ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಪರ ವಕೀಲ ಮೊಹಮ್ಮದ್ ಮನ್ಸೂರ್ ಪ್ರಕರಣವನ್ನು ನಡೆಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಗೊನ್ಸಾಲ್ವೆಸ್ ಪರವಾಗಿ ಸಿಖ್ಯಾ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ನಿಂದ ಮಾವುತ ದಂಪತಿಗಳು ಕಳಿಸಿದ ಲೀಗಲ್ ನೋಟಿಸ್ಗೆ ಉತ್ತರ ಬಂದಿದೆ . ಅದರಲ್ಲಿ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಬೊಮ್ಮನ್ ದಂಪತಿಗಳಿಗೆ ಈಗಾಗಲೇ ನೀಡಬೇಕಾದ ಹಣವನ್ನು ನೀಡಿರುವುದಾಗಿ ಇನ್ನಾವುದೇ ಹೆಚ್ಚಿನ ಸಹಾಯ ಮಾಡಲಾಗುವುದಿಲ್ಲಾ ಎಂದು ಸ್ಪಷ್ಟಪಡಿಸಿದರು.