ಮುದ್ದೇಬಿಹಾಳ, ಆ 07 (DaijiworldNews/HR): 12 ವರ್ಷದ ಬಾಲಕ ಶಾಲೆಗೆ ಹೋಗುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ಇಂಜೆಕ್ಷನ್ ಚುಚ್ಚಿದ್ದು, ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.
ಇಂಜೆಕ್ಷನ್ ಚುಚ್ಚಿರುವುದು ಗೊತ್ತಾದ ಕೂಡಲೇ ಶಾಲೆ ಬಿಟ್ಟು ಮನೆಗೆ ಮರಳಿದ ಬಾಲಕ ಮನಯವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಅವನನ್ನು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.
ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಲ್ಸಿ ಪ್ರಕರಣದ ಅಡಿ ಹೆಸರು ನೋಂದಾಯಿಸಿಕೊಂಡು ವೈದ್ಯರು ಪರಿಶೀಲಿಸಿದಾಗ ಬಾಲಕ ಹೇಳುವ ಜಾಗದಲ್ಲಿ ಚುಚ್ಚಿದ ಗುರುತು ಇದೆ. ಆದರೆ ಅದು ಇಂಜೆಕ್ಷನ್ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದರಿಂದ ಗಾಬರಿಗೊಂಡ ಪಾಲಕರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರು ಬಾಲಕ ಮತ್ತು ಪಾಲಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.