ಭೋಪಾಲ್ , ಆ 07 (DaijiworldNews/AK): ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಪುನಸ್ಥಾಪಿಸಿರುವುದು ತಾತ್ಕಾಲಿಕ ಪರಿಹಾರವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಚಾರಣೆ ನಡೆದು, ಅಂತಿಮವಾಗಿ ವಿಷಯ ಇತ್ಯರ್ಥವಾಗುವವರೆಗೆ ಇದು ತಾತ್ಕಾಲಿಕ ಪರಿಹಾರವಾಗಿದೆ. ಸುಪ್ರೀಂ ಕೋರ್ಟ್ನ ಈ ಮಧ್ಯಂತರ ಆದೇಶದ ಪರಿಣಾಮವಾಗಿ, ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ತಾತ್ಕಾಲಿಕವಾಗಿ ಪುನಸ್ಥಾಪಿಸಲಾಗಿದೆ.
ಗುಜರಾತ್ ಹೈಕೋರ್ಟ್ನ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೆ, ಸ್ವಾಭಾವಿಕವಾಗಿ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಮತ್ತೊಂದು ಬಾರಿ ರದ್ದುಗೊಳಿಸಲಾಗುತ್ತದೆ. ಅಲ್ಲಿಯವರೆಗೆ ಅವರು ಸಂತೋಷವಾಗಿರಬಹುದು”ಎಂದು ತೇಜಸ್ವಿ ಸೂರ್ಯ ಹೇಳಿದರು.