ಚಿಕ್ಕೋಡಿ, ಆ 07 (DaijiworldNews/AK): ನನ್ನ ಹತ್ತಿರನೂ ಪೆನ್ಡ್ರೈವ್ ಇದೆ. ಬಿಡುಗಡೆಗಾಗಿ ಸಂದರ್ಭಕ್ಕೆ ಕಾಯುತ್ತಿದ್ದೇನೆ ಎಂದು ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು , ನನ್ನ ಹತ್ತಿರ ಪೆನ್ಡ್ರೈವ್ ಇದ್ದಾವೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪೆನ್ಡ್ರೈವ್ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ.
ನಾನು ಮಾಧ್ಯಮದಲ್ಲಿ ಹೆಚ್ಡಿಕೆ ಮಾತನ್ನು ನೋಡಿದ್ದೇನೆ. ತುಂಬಾ ಜನರ ಕಡೆ ಪೆನ್ಡ್ರೈವ್ ಇದ್ದಾವೆ. ನನ್ನ ಹತ್ತಿರ ಒಂದು ಪೆನ್ಡ್ರೈವ್ ಇದೆ, ಕಾಲಾನುಸಾರ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ವಿರೋಧ ಪಕ್ಷ ಇದೆಯೆಂದು ತೋರಿಸಲು ಆ ರೀತಿ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂದು ಲಕ್ಷ್ಮಣ ಸವದಿ ಆರೋಪಿಸಿದ್ದಾರೆ