ಬೆಂಗಳೂರು, ಆ 07 (DaijiworldNews/AK):ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರ ಸಂಸದ ಸ್ಥಾನ ಮರುಸ್ಥಾಪನೆಯಾಗಿರುವುದು ಕಾಂಗ್ರೆಸ್ ನ ವಲಯದಲ್ಲೂ ಸಂಭ್ರಮ ಮನೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸತ್ಯಕ್ಕೆ ಹಿನ್ನೆಡೆ ಇರಬಹುದು, ಸತ್ಯಕ್ಕೆ ಅಂತ್ಯವಿರುವುದಿಲ್ಲ. ರಾಹುಲ್ ಗಾಂಧಿಯವರನ್ನು ಯಾವ ಯಾವ ಬಗೆಯಲ್ಲಿ ತುಳಿಯಲು ಯತ್ನಿಸಿದರೂ ಪುಟಿದು ಮೇಲೆದ್ದು ಬರುತ್ತಾರೆ.
ಏಕೆಂದರೆ ರಾಹುಲ್ ಅವರೊಂದಿಗೆ ನ್ಯಾಯವಿದೆ, ಸತ್ಯವಿದೆ. ಭ್ರಷ್ಟರಿಗೆ ದುಃಸ್ವಪ್ನವಾಗಿ ಮತ್ತೊಮ್ಮೆ ಸಂಸತ್ತಿಗೆ ಸಿಂಹದಂತೆ ಕಾಲಿಡುತ್ತಿದ್ದಾರೆ ಎಂದು ಹೇಳಿದೆ.