ಮುಂಬೈ, ಆ 07 (DaijiworldNews/MS): ಶಿವಸೇನಾ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮುಂಬೈ ನಿವಾಸ ‘ಮಾತೋಶ್ರೀ’ಯಲ್ಲಿ ಭಾನುವಾರ ಮಧ್ಯಾಹ್ನ ನಾಲ್ಕು ಅಡಿ ಉದ್ದದ ನಾಗರಹಾವು ಪತ್ತೆಯಾಗಿದೆ.
ಭಾನುವಾರ ಮಧ್ಯಾಹ್ನ 1.30 ರ ಸುಮಾರಿಗೆ ಹಾವು ಕಂಡುಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಅತುಲ್ ಕಾಂಬ್ಳೆ ಅವರಿಗೆ ಕರೆ ಮಾಡಲಾಗಿದೆ ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅವರು ತಮ್ಮ ತಂಡದೊಂದಿಗೆ ಠಾಕ್ರೆ ನಿವಾಸಕ್ಕೆ ಬಂದು ಮನೆಯೊಳಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.ಬಂಗಲೆಯ ಆವರಣದಲ್ಲಿ ಹಾವು ಇರುವ ಬಗ್ಗೆ ಉರಗ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿತ್ತು.
ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳು ವೈರಲ್ ಆಗಿದ್ದು. ವೀಡಿಯೊದಲ್ಲಿ, ಉದ್ಧವ್ ಠಾಕ್ರೆ ಅವರ ಕಿರಿಯ ಮಗ ತೇಜಸ್ ಠಾಕ್ರೆ ಕೂಡಾ ಸ್ಥಳದಲ್ಲಿದ್ದರು.
ವನ್ಯಜೀವಿ ಸಂಶೋಧಕರಾಗಿರುವ ತೇಜಸ್ ಠಾಕ್ರೆ ಅವರು ಹಾವಿನ ರಕ್ಷಣೆಯ ಪ್ರಯತ್ನದ ಸಮಯದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕೂಡಾ ಕಂಡುಬಂದಿದೆ.