ಗುವಾಹಟಿ, ಆ 07 (DaijiworldNews/AK): ಮಣಿಪುರದ ರಾಜ್ಯದಲ್ಲಿನ ಪ್ರಸ್ತುತ ಹಿಂಸಾಚಾರದ ಪರಿಸ್ಥಿತಿಯನ್ನು ಪರಿಗಣಿಸಿದ ಬಳಿಕ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ.ಈ ನಿಟ್ಟಿನಲ್ಲಿ ಎನ್ ಡಿಎ ಮೈತ್ರಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ಕುಕಿ ಪೀಪಲ್ ಅಲೈಯನ್ಸ್ ಅಧ್ಯಕ್ಷ ಟಾಂಗ್ಮಾಂಗ್ ಹವೊಕಿಪ್ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ಹಿಂಸಾಚಾರ, ಘರ್ಷಣೆಯಿಂದ ಮಣಿಪುರದ ಜನರು ಬೇಸತ್ತು ಹೋಗಿದ್ದ , ಏತನ್ಮಧ್ಯೆ ಮಣಿಪುರದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಕುಕಿ ಪೀಪಲ್ಸ್ ಅಲೈಯೆನ್ಸ್ ಘೋಷಿಸಿದೆ.
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೆಪಿಎ ಪಕ್ಷದ ಇಬ್ಬರು ಶಾಸಕರು ನೀಡಿದ್ದ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ರಾಜ್ಯಪಾಲರಾದ ಅನುಸೂಯಾ ಯೂಕಿ ಅವರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ.