ಕಲಬುರಗಿ, ಆ 07 (DaijiworldNews/HR): ಪಬ್ಜಿ ಆನ್ಲೈನ್ ಗೇಮ್ಗಳಲ್ಲಿ ಹಣ ಕಳೆದುಕೊಂಡು ಕೊನೆಗೆ ಈತ ಸಾಲ ತೀರಿಸಲಾಗದೇ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಪ್ರವೀಣ್ ಪಾಟೀಲ್ (20) ಎಂದು ಗುರುತಿಸಲಾಗಿದೆ.
ಈ ಘಟನೆ ಕಲಬುರಗಿ ನಗರದ ದೇವಿ ನಗರ ಮನೆಯಲ್ಲಿ ನಡೆದಿದ್ದು, ಯುವಕ ಮನೆಯಲ್ಲಿ ಯಾರೂ ಇಲ್ಲದ ಮಯ ನೋಡಿ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾನೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.