ಚಾಮರಾಜನಗರ, ಆ 07 (DaijiworldNews/AK): ಇತ್ತೀಚಿಗೆ ಹುಡುಗಿಯರು ನಾನು ಕೃಷಿಕರನ್ನು ಮದುವೆಯಾಗುವುದಿಲ್ಲ ನನಗೆ ಸರ್ಕಾರಿ ಅಥವಾ ಐಟಿ-ಬಿಟಿ ಉದ್ಯೋಗಸ್ಥನೇ ಬೇಕು ಎಂದು ಹುಡುಗಿಯರು ಹೇಳುತ್ತಿದ್ದಾರೆ. ಇತ್ತ ರೈತನಿಗೆ ನಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ಪೋಷಕರು ಹೇಳುತ್ತಿದ್ದರೆ.
ಇದೇರೀತಿಯಾದ ಅನುಭವಗಳು ಲಕ್ಷ್ಮೀಪುರದ ಯುವ ರೈತ ರಾಜೇಂದ್ರ ಅವರಿಗೆ ಆಗಿದೆ. ಯುವ ರೈತ ರಾಜೇಂದ್ರ ಈ ಹಿಂದೆ ಕನ್ಯೆ ನೋಡಲು ಹೋದಾಗ ರೈತನೆಂದು ಯುವತಿಯರು ಮದುವೆಯಾಗಲು ನಿರಾಕರಿಸಿದ್ದಳು. ಸರ್ಕಾರಿ ಕೆಲಸ ಇದ್ದವರಿಗೆ ಮಾತ್ರ ನಮ್ಮ ಮಗಳನ್ನು ಕೊಡುವುದಾಗಿ ಪೋಷಕರು ಅವಮಾನಿಸಿದ್ದರು.
ಹೀಗಾಗಿ ಇದನ್ನ ಚಾಲೆಂಜ್ ತೆಗೆದುಕೊಂಡ ರಾಜೇಂದ್ರ ನಾನು ಸರ್ಕಾರಿ ಉದ್ಯೋಗಿ ಮತ್ತು ಐಟಿ-ಬಿಟಿ ಉದ್ಯೋಗಸ್ಥರಿಗಿಂತ ಕೃಷಿಯಲ್ಲೇ ಹೆಚ್ಚು ಆದಾಯ ಗಳಿಸುತ್ತೇನೆಂದು ಪಣ ತೊಟ್ಟಿದ್ದರು. ಅದರಂತೆ ಲಕ್ಷ್ಮೀಪುರದಲ್ಲಿ ತನ್ನ 12 ಎಕರೆ ಜಮೀನಿನಲ್ಲಿ ರೈತ ರಾಜೇಂದ್ರ ಟೊಮೆಟೋ ಬೆಳೆದು. ಆರು ತಿಂಗಳಲ್ಲಿ ಫಸಲು ಬಂದಿದೆ. ಈಗ ಟೊಮೆಟೋ ದರ ಏರಿಕೆಯಾದ ಹಿನ್ನಲೆ ಒಳ್ಳೆ ಬೆಲೆಗೆ ಮಾರಾಟ ಮಾಡಿ ಕೋಟ್ಯಾಧಿಪತಿಯಾಗಿದ್ದಾರೆ. ಹೊಸ ಮಹೇಂದ್ರ ಕಾರು ಖರೀದಿಸಿ ಅದರಲ್ಲೇ ಹುಡುಗಿ ನೋಡಲು ಹೋಗುತ್ತೇನೆಂದು ಯುವ ರೈತ ರಾಜೇಂದ್ರ ಹೇಳುತ್ತಿದ್ದಾರೆ.