ಬೆಂಗಳೂರು, ಆ 07 (DaijiworldNews/MS): ರಾಜ್ಯ ವಿಧಾನಸಭೆ ಸೋಲಿನ ಬಳಿಕ ಮಾಜಿ ಸಿಎಂ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ ದೆಹಲಿಗೆ ದಿಢೀರ್ ರಾತ್ರೋರಾತ್ರಿ ಪ್ರವಾಸ ಕೈಗೊಂಡಿದ್ದು, ಇಂದು ಅವರು ಪಕ್ಷದ ವರಿಷ್ಟರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಆದರೆ ವರಿಷ್ಟರ ಭೇಟಿಗೆ ಇನ್ನು ಕೂಡ ಸಮಯ ನಿಗದಿಯಾಗಿಲ್ಲ. ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದರೂ ಪ್ರತಿಪಕ್ದದ ನಾಯಕನ ಆಯ್ಕೆಯಾಗಿಲ್ಲ. ಹೀಗಾಗಿ, ಆದಷ್ಟು ಬೇಗ ಈ ಬಗ್ಗೆ ತೀರ್ಮಾನ ಕೈಗೊಂಡು ಯಾರನ್ನಾದರೂ ವಿಪಕ್ಷ ನಾಯಕರನ್ನಾಗಿ ಆಯ್ಕೆಗೊಳಿಸುವಂತೆ ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಲು ಬೊಮ್ಮಾಯಿ ದೆಹಲಿಗೆ ತೆರಳಿರುವುದಾಗಿ ಮೂಲಗಳು ತಿಳಿಸಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದೊಳಗೆ ಕುತೂಹಲ, ಉತ್ಸಾಹ ಗರಿಗೆದರಿದೆ.