ಲಕ್ನೋ,ಆ 06 (DaijiworldNews/AK): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಟ್ಸಾಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ ಕಾರಣಕ್ಕೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ನ್ನು ಬಂಧಿಸಲಾಗಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ಹೇಳಿದ್ದಾರೆ.
ಆಗಸ್ಟ್ 4 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಬಂಧಿತ ವ್ಯಕ್ತಿಯನ್ನು ಸಹಾಬುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಕಾಮೆಂಟ್ ಪೋಸ್ಟ್ ಮಾಡಿದ ಮುಸ್ಲಿಂ ಅನ್ಸಾರಿ ಎಂದು ಗುರುತಿಸಲಾದ ವ್ಯಕ್ತಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು. ಈ ಸಂಬಂಧ ಪೊಲೀಸರು ಆಗಸ್ಟ್ 4 ರಂದು ಟ್ವಿಟರ್ ಮೂಲಕ ದೂರು ಸ್ವೀಕರಿಸಲಾಗಿದೆ ಎಂದು ಸೇಠ್ ಹೇಳಿದ್ದಾರೆ.
ವಾಟ್ಸಾಪ್ ಗ್ರೂಪ್ನ ಹೆಸರು ‘ನಗರ ಪಾಲಿಕೆ ಪರಿಷತ್ ಭದೋಹಿ’, ಇದು ಭಡೋಹಿಯ ನಗರ ಪಾಲಿಕೆ ಪರಿಷತ್ತಿನ ಬಹುತೇಕ ಎಲ್ಲಾ ಕಾರ್ಪೊರೇಟರ್ಗಳು ಮತ್ತು ಸಾರ್ವಜನಿಕರನ್ನು ಹೊಂದಿದೆ. ಇದರ ಉದ್ದೇಶ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿದೆ ಎಂದಿದ್ದಾರೆ. ಆದರೆ ಇದು ಕಾರ್ಪೊರೇಟರ್ಗಳ ಅಧಿಕೃತ ವಾಟ್ಸಾಪ್ ಗ್ರೂಪ್ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅವಹೇಳನಕಾರಿ ಕಾಮೆಂಟ್ ನ ಸ್ಕ್ರೀನ್ ಶಾಟ್ ಪಡೆಯಲಾಗಿದೆ. ದೂರಿನ ಆಧಾರದ ಮೇಲೆ ಸಹಾಬುದ್ದೀನ್ ಅನ್ಸಾರಿ ಮತ್ತು ಮುಸ್ಲಿಂ ಅನ್ಸಾರಿ ವಿರುದ್ಧ ಐಪಿಸಿ, ಐಟಿ ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.