ಬೆಂಗಳೂರು, ಎ05(SS): ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ, ಪಾಕ್ಗೆ ನಡುಕ ಹುಟ್ಟಿಸಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಕಾಲು ಕೆರೆದುಕೊಂಡು ಗಡಿಯಲ್ಲಿ ತಂಟೆ ಮಾಡಿದಾಗ ಹಿಂದಿದ್ದ ಸರಕಾರಗಳು ಕಠಿಣ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಪಾಕ್ಗೆ ನಡುಕ ಹುಟ್ಟಿಸಿದ್ದಾರೆ. ಸೈನಿಕರಿಗೆ ಬೆಂಬಲ ನೀಡಿ, ವೈರಿಗೆ ತಕ್ಕ ತಿರುಗೇಟು ನೀಡಿದ್ದಾರೆರ ಎಂದು ತಿಳಿಸಿದರು.
ಪ್ರಧಾನಿ ಪುಲ್ವಾಮ ದಾಳಿ ನಂತರ ಸೈನಿಕರ ಬೆಂಬಲಕ್ಕೆ ನಿಂತರು. ಬಳಿಕ, ಪಾಕಿಸ್ತಾನದ ಬಾಲಾಕೋಟ್ನ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿ ಉಗ್ರರನ್ನು ಮಟ್ಟ ಹಾಕಲಾಯಿತು. ಇದು ದೇಶದ ರಕ್ಷಣೆ ವಿಷಯದಲ್ಲಿ ಮೋದಿಯವರು ಕೈಗೊಂಡ ದಿಟ್ಟ ಕ್ರಮಕ್ಕೆ ಸಾಕ್ಷಿ ಎಂದು ತಿಳಿಸಿದರು.
ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿರುವ ಮತ್ತು ದೇಶದ ರಕ್ಷಣೆಗೆ ಒತ್ತು ನೀಡಿರುವ ಬಿಜೆಪಿಯನನ್ನು ಪುನಃ ಅಧಿಕಾರಕ್ಕೆ ತರಲು ಮತದಾರರು ತಮ್ಮನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡರು.