ಬೆಂಗಳೂರು, ಆ 06 (DaijiworldNews/MS): ರಾಜ್ಯದಲ್ಲಿ ಕಳೆದ ಮೂರುವರೆ ವರ್ಷದಲ್ಲಿ 45,557 ಬಾಲಕಿಯರು ತಾಯಂದಿರಾಗಿರುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
30 ಜಿಲ್ಲೆಗಳ ಪೈಕಿ ಮೈಸೂರಿನಲ್ಲಿಯೇ ಅತ್ಯಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಂತರದ ಸ್ಥಾನದಲ್ಲಿ ಚಿತ್ರದುರ್ಗ, ಬಳ್ಳಾರಿ, ತುಮಕೂರು ಮತ್ತು ಕಲಬುರಗಿ ಜಿಲ್ಲೆಯಿದೆ. ಅತಿ ಕಡಿಮೆ ಪ್ರಕರಣ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ದಾಖಲಾಗಿವೆ.
ಕೊವೀಡ್ ಮೊದಲ ಮತ್ತು ಎರಡನೇ ಅವಧಿಗಿಂತಲೂ , ಆ ನಂತರದ ವರ್ಷದಲ್ಲಿ ಅಂದರೆ 2022ರಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.
ಒಡನಾಡಿ ಸಂಸ್ಥೆಯು ಆರ್ಟಿಐನಡಿ ಈ ಮಾಹಿತಿ ಪಡೆದುಕೊಂಡಿದ್ದು, ಕೊರೊನಾ ನಂತರದಲ್ಲಿ ತಾಯಂದಿರಾಗುವ ಅಪ್ರಾಪ್ತ ಬಾಲಕಿಯರ ಸಂಖ್ಯೆ ಹೆಚ್ಚಾಗಿರುವುದು ಕಂಡುಬಂದಿದೆ.