ಬೆಂಗಳೂರು, ಆ 06 (DaijiworldNews/MS): ನಾನಾ ವೃತ್ತಿಪರ ಕೋರ್ಸ್ಗಳಿಗೆ ಸಿಇಟಿ ಮತ್ತು ನೀಟ್ ಸೀಟ್ ಮ್ಯಾಟ್ರಿಕ್ಸ್ ವಿವರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದು ಪ್ರಕಟಿಸಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಆದ್ಯತೆ ಅನುಸಾರ ಸಂಯೋಜಿತವಾಗಿ ಐಚ್ಛಿಕಗಳನ್ನು ದಾಖಲಿಸಲು ಇಂದಿನಿಂದ ಆ.೯ರವರೆಗೆ ಅವಕಾಶವಿದೆ.
ಅಭ್ಯರ್ಥಿಗಳು ತಮ್ಮ ಆಪ್ಶನ್ ಬದಲಿಸಲು ಅಥವಾ ಪರಿಷ್ಕರಿಸಲು ಆ.11ರ ಬೆಳಗ್ಗೆ 8ರಿಂದ ಆ.14ರವರೆಗೆ ಅವಕಾಶ ಇರಲಿದೆ. ಆ. 16ರಂದು ಬೆಳಗ್ಗೆ 6 ಗಂಟೆಗೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.
ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ ಮತ್ತು ನ್ಯಾಚುರೋಪಥಿ ಹಾಗೂ ಬಿ.ಎಸ್ಸಿ. ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ವಿವರವನ್ನು ಸರಕಾರ ನೀಡಿಲ್ಲ. ಈ ಕೋರ್ಸ್ಗಳ ಮಾಹಿತಿ ಬಂದ ಬಳಿಕ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ತಿಳಿಸುವ ಸಾಧ್ಯತೆ ಇದೆ