ನವದೆಹಲಿ, ಆ 06 (DaijiworldNews/MS): ಚಂದ್ರಯಾನ- 3' ಮತ್ತೊಂದು ಹೆಜ್ಜೆ ಕ್ರಮಿಸಿದ್ದು, ನೌಕೆಯು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.
ಈ ಬಗ್ಗೆಇಸ್ರೋ ಮಾಹಿತಿ ನೀಡಿದ್ದು, ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದೆ ಎಂದು ಹೇಳಿದೆ. ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ತಲುಪಿದ ತಕ್ಷಣ ತನ್ನ ಮೊದಲ ಸಂದೇಶವನ್ನು ಕಳುಹಿಸಿದೆ. ಸಂದೇಶವು- 'ಮಿಷನ್ ಆಪರೇಷನ್ಸ್ (MOX), ISTRAC, ಬೆಂಗಳೂರು, ಇದು ಚಂದ್ರಯಾನ-3. ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತೇನೆ.
ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಸಂಕೋಚನ ಪ್ರಕ್ರಿಯೆಯನ್ನು ಆಗಸ್ಟ್ 6ರ ಭಾನುವಾರ ರಾತ್ರಿ 11 ಗಂಟೆ ಹಾಗೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.