ಬೆಂಗಳೂರು,ಆ 05 (DaijiworldNews/MS): ಟೋಪಿ ಹಾಕೋಕೂ ಒಂದು ಇತಿ ಮಿತಿ ಇದೆ. ಬಿಜೆಪಿ ಸರ್ಕಾರ ಸಿದ್ದರಾಮಯ್ಯ ಇದ್ದಾಗ ಚೆಂಡು ಹೂ ಮುಟ್ಕೊಂಡು ಹೋಗಿದ್ರಿ. ಇವಾಗ ರಾಜ್ಯದ ಜನರಿಗೆ ಫ್ಲವರ್ ಫಾಟ್ ಹಿಡಿಯುತ್ತಿದ್ದೀರಿ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
12 ದಿನಗಳ ಕಾಲ ಹೊರ ದೇಶಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆ. ನಾನು ವಿದೇಶದಲ್ಲಿದ್ದಾಗ ಮಾಧ್ಯಮಗಳ ವರದಿ ಗಮನಿದಿದ್ದೇನೆ. ಹಿಟ್ ಅಂಡ್ ರನ್ ಮಾಡುವ ಜಾಯಮಾನದ ವ್ಯಕ್ತಿ ನಾನಲ್ಲ. ಹಿಟ್ ಅಂಡ್ ರನ್ ಮಾಡುವ ಸಂಸ್ಕೃತಿ ಕಾಂಗ್ರೆಸ್ಗೆ ಸೇರುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನವರು ನುಡಿದಂತೆ ನಡೆದಿದ್ದೇವೆ ಎಂದು ಜಾಹಿರಾತು ಕೊಟ್ಟಿದ್ದಾರೆ. ಯಾವ ರೀತಿ ನುಡಿದಂತೆ ನಡೆದಿದ್ದೀರಿ? ನೀವು ಕರೆಂಟ್ ಕೊಟ್ಟ ನಂತರ ಪಾಪ ಅವ್ರು ಬೆಳಕು ಕಾಣ್ತಿದ್ದಾರೆ ಅಲ್ವಾ? 200 ಯೂನಿಟ್ ಉಚಿತ ಎಂದು ಗೈಡ್ ಲೈನ್ಸ್ ಹಾಕಿದ್ರಲ್ಲ ಅದಕ್ಕೆ ನನ್ನ ತಕರಾರು ಇಲ್ಲ. 230-240 ಯುನಿಟ್ ವಿದ್ಯುತ್ ಬಳಸಿದವರಿಗೂ ವಿದ್ಯುತ್ ಬಿಲ್ ಕಳುಹಿಸಿದ್ದಾರೆ. ಟೋಪಿ ಹಾಕೋಕೂ ಒಂದು ಇತಿ ಮಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.