ನವದೆಹಲಿ, ಆ 04 (DaijiworldNews/HR): ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ನಮ್ಮ ಜೊತೆ ನಿಂತ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಜ್ ನಹೀ ತೋಹ್ ಕಲ್, ಕಲ್ ನಹೀ ತೋ ಪರ್ಸೋ ಸಚ್ ಕಿ ಜೀತ್ ಹೋತಿ ಹೈ ( ಇವತ್ತು ಅಲ್ಲದಿದ್ದರೆ ನಾಳೆ, ನಾಳೆ ಅಥವಾ ನಾಡಿದ್ದು ಸತ್ಯ ಗೆದ್ದೇ ಗೆಲ್ಲುತ್ತದೆ). ನನ್ನ ಹಾದಿ ಸ್ಪಷ್ಟವಾಗಿದೆ ಎಂದರು.
ಇನ್ನು ನಾನು ಏನು ಮಾಡಬೇಕು ಮತ್ತು ನನ್ನ ಕೆಲಸ ಏನು ಎಂದು ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇದೆ. ನಮಗೆ ಸಹಾಯ ಮಾಡಿದ ಜನರಿಗೆ ನಾನು ಧನ್ಯವಾದಗಳು . ಜನರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.