ಥಾಣೆ, ಆ 04 (DaijiworldNews/MS): ಮಹಾರಾಷ್ಟ್ರದ ಥಾಣೆಯಲ್ಲಿರುವ ವಿದ್ಯಾ ಪ್ರಸಾರಕ್ ಮಂಡಲ್ ಕಾಲೇಜಿನಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್ಸಿಸಿ) ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಯೊರ್ವ ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲ್ಲೆ ನಡೆಸಿದವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.
ವಿಡಿಯೊದಲ್ಲಿ 8 ಮಂದಿ ಎನ್ಸಿಸಿ ವಿದ್ಯಾರ್ಥಿಗಳ ಗುಂಪನ್ನು ಶಿಕ್ಷೆಯ ಭಾಗವಾಗಿ ಮಳೆಯಲ್ಲಿ ತಲೆ ನೆಲಕ್ಕೆ ಹಾಕಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕುಳಿತಿದ್ದಾರೆ. ವಿದ್ಯಾರ್ಥಿಗಳನ್ನು ಹಿರಿಯ ಎನ್ಸಿಸಿ ತರಬೇತುದಾರ ದೊಣ್ಣೆಯಿಂದ ರಭಸವಾಗಿ ಥಳಿಸಿಸುತ್ತಿರುವುದು ನೋಡಬಹುದಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳು ಸಹಾಯಕ್ಕಾಗಿ ಅಳುತ್ತಿರುವಂತೆಯೇ ಅಮಾನವೀಯ ಶಿಕ್ಷೆ ನೀಡಲಾಗಿದೆ.
'ಇದು ಖಂಡನೀಯ ಘಟನೆಯಾಗಿದ್ದು ಈ ಸಂಬಂಧ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ. ಅಮಾನುಗೊಳಿಸಿತ್ತೇವೆ' ಎಂದು ಪ್ರಾಂಶುಪಾಲರಾದ ಡಾ ಸುಚಿತ್ರಾ ನಾಯ್ಕ್ ಹೇಳಿದ್ದಾರೆ.