ನವದೆಹಲಿ, ಎ05(SS): ನನ್ನ ಸೋದರ ನನ್ನ ನಿಜವಾದ ಸ್ನೇಹಿತ. ನನಗೆ ತಿಳಿದ ಮಟ್ಟಿಗೆ ರಾಹುಲ್ ಗಾಂಧಿ ಅತ್ಯಂತ ಧೈರ್ಯಶಾಲಿ ವ್ಯಕ್ತಿ. ವಯನಾಡಿನಲ್ಲಿ ಅವರು ಗೆಲ್ಲುವಂತೆ ಕಾಳಜಿ ವಹಿಸಿ. ಸೋಲಲು ಬಿಡಬೇಡಿ ಎಂದು ರಾಹುಲ್ ಗಾಂಧಿಯವರ ಪರ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ಅಮೇಠಿಯೊಂದಿಗೆ ಕೇರಳದ ವಯನಾಡಿನಲ್ಲೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ (ಎ.05) ನಾಮಪತ್ರ ಸಲ್ಲಿಸಿದ್ದಾರೆ. ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ನ ಹಿರಿಯ ಮುಖಂಡರ ಜತೆಗೆ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಆರ್ ಅಜಯ್ ಕುಮಾರ್ ಅವರಿಗೆ ರಾಹುಲ್ ಗಾಂಧಿ ಉಮೇದುವಾರಿಕೆ ಸಲ್ಲಿಸಿದರು. ಕೆಸಿ ವೇಣುಗೋಪಾಲ್ ಮತ್ತು ಮುಖುಲ್ ವಾಸ್ನಿಕ್ ಜತೆಗಿದ್ದರು.
ಬಳಿಕ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿ ರೋಡ್ ಶೋ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ರಾಹುಲ್ ಗಾಂಧಿ ಪರ ಘೋಷಣೆಗಳನ್ನು ಕೂಗಿದರು. ಬಿಸಿಲಿನ ಝಳವನ್ನು ಲೆಕ್ಕಿಸದೆ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವ ಜನತೆ ಆಗಮಿಸಿತ್ತು.