ಉತ್ತರಪ್ರದೇಶ, ಆ 3 (DaijiworldNews/AK): ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಉತ್ತರ ಪ್ರದೇಶದ ವ್ಯಕ್ತಿ ಸಚಿನ್ ಮೀನಾ ಅವರನ್ನು ಹುಡುಕಿ ತಾವು ಬಂದಿರುವುದಾಗಿ ಅವರು ಹೇಳಿಕೊಂಡಿದ್ದರು. ಸದ್ಯ ಈ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ನಿರ್ಮಾಪಕ ಅಮಿತ್ ಸೀಮಾ ಹೈದರ್ಗೆ ಅವರಿಗೆ ಸಿನಿಮಾ ಆಫರ್ ನೀಡಿದ್ದಾರೆ. ಇದೀಗ ನಿರ್ಮಾಪಕ ಅಮಿತ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬಂದ ಸೀಮಾ ಅವರು ಸಚಿನ್ ಮತ್ತು 4 ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಜೀವನ ಅಷ್ಟು ಸುಲಭವಿಲ್ಲ. ಈ ಕಾರಣಕ್ಕೆ ಮೀರಠ್ ಮೂಲದ ಅಮಿತ್ ಜಾನಿ ಅವರು ಸೀಮಾಗೆ ಸಿನಿಮಾ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ನಟಿಸಲು ಅವರಿಗೆ ಆಫರ್ ನೀಡಿರುವ ವಿಚಾರ ಚರ್ಚೆ ಆಗುತ್ತಿದೆ.
ಭಾರತದ ಸುರಕ್ಷತಾ ದೃಷ್ಟಿಯಿಂದ ಸೀಮಾ ಹಾಗೂ ಸಚಿನ್ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಸೀಮಾ ಹಾಗೂ ಸಚಿನ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದರು. ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಸೀಮಾ ಹೈದರ್ ಅವರ ಆರ್ಥಿಕ ಪರಿಸ್ಥಿತಿ ನೋಡಿ ನನಗೆ ಬೇಸರವಾಗಿದೆ. ಈ ಕಾರಣಕ್ಕೆ ಅವರಿಗೆ ಸಹಕಾರಿ ಆಗಲಿ ಎಂಬ ಕಾರಣಕ್ಕೆ ನಾನು ಸಿನಿಮಾ ಆಫರ್ ನೀಡುತ್ತಿದ್ದೇನೆ. ಉದಯಪುರದ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಸಾಹು ಹತ್ಯೆಯ ಕುರಿತು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ಸೀಮಾ ಕೂಡ ನಟಿಸುತ್ತಿದ್ದಾರೆ’ ಎಂದು ಅಮಿತ್ ಹೇಳಿದ್ದಾರೆ. ಈ ಚಿತ್ರವನ್ನು ನವೆಂಬರ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.ಆದರೆ ಸೀಮಾ ಈ ಆಫರ್ ಒಪ್ಪುತ್ತಾರಾಅನ್ನುವ ಪ್ರಶ್ನೆಯಾದರೆ. ಒಪ್ಪಿದರೆ ಅವರಿಗೆ ನಟಿಸಲು ಪೊಲೀಸರು ಒಪ್ಪಿಗೆ ಸಿಗುತ್ತದೆಯೇ ಎಂಬುದನ್ನು ನೋಡಬೇಕಿದೆ.