ನವದೆಹಲಿ, ಏ 04(SM): ರಾಜಕೀಯ ಮೂಲೆ ಗುಂಪಾಗುತ್ತಿರುವ ಬಿಜೆಪಿಯ ಹಿರಿಯ ಮುಖಂಡ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಗುರು ಲಾಲ್ ಕೃಷ್ಣ ಅಡ್ವಾಣಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ಹಾಗೂ ತಾವೇ ಕಟ್ಟಿ ಬೆಳೆಸಿದ ಬಿಜೆಪಿಗೆ ಕೆಲವು ಸಲಹೆಗಳನ್ನು ಅವರು ನೀಡಿದ್ದಾರೆ.
ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಕರೆಯುತ್ತಿರುವ ಬಿಜೆಪಿಯ ಸಂಸ್ಕೃತಿಯನ್ನು ಅವರು ಟೀಕಿಸಿದ್ದಾರೆ. ಯಾರನ್ನೂ ಕೂಡ ದೇಶದ್ರೋಹಿಗಳು ಎನ್ನಬೇಡಿ ಎಂದು ಅಡ್ವಾಣಿ ಮನವಿ ಮಾಡಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ ಹಲವು ಸಮಯದ ಬಳಿಕ ದೀರ್ಘವಾದ ಬ್ಲಾಗ್ ಬರೆದಿದ್ದಾರೆ. ಬ್ಲಾಗ್ ನಲ್ಲಿ ದೇಶವೇ ಮೊದಲು ಎಂಬುವುದನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬಳಿಕ ಪಕ್ಷ ಎಂದಿರುವ ಅವರು ಧ್ಯೇಯಗಳಾನ್ನೇಲ್ಲ ಕೊನೆಗಿಡಿ ಎಂದು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರಕಾರ ದೇಶದಲ್ಲಿ ಆಡಳಿತಕ್ಕೆ ಬಂದ ಬಳಿಕ ಹಿರಿಯ ನಾಯಕ ಅಡ್ವಾಣಿಯವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಎಲ್.ಕೆ. ಅಡ್ವಾಣಿಯವರು ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಸ್ಥಾನ ಮೋದಿ ಪಾಲಾಯಿತು. ಬಳಿಕ ರಾಷ್ಟ್ರಪತಿ ಸ್ಥಾನವಾದರೂ ಸಿಗ ಬಹುದೆಂದು ಅವರು ಭಾವಿಸಿದ್ದರು. ಆದರೆ, ಆ ಸ್ಥಾನ ಕೂಡ ಕೈ ತಪ್ಪಿದೆ.