ಬೆಂಗಳೂರು, ಅ 1(DaijiworldNews/AK):ಸರಕಾರ ಹಾಲಿನ ಬೆಲೆ ಏರಿಕೆಗೆ ಸಮ್ಮತಿ ನೀಡಿದ ಬೆನ್ನಲ್ಲೇ ಕೆಎಂಎಫ್ ದರ ಪರಿಷ್ಕರಣೆ ಮಾಡಿದೆ. ಹಾಲಿನ ಜತೆಗೆ ಮೊಸರು, ಮಜ್ಜಿಗೆ ಬೆಲೆಯನ್ನೂ ಹೆಚ್ಚಿಸಿದ್ದು ಇಂದಿನಿಂದ ದರ ಜಾರಿಯಾಗಲಿದೆ
ಸರಕಾರವು ಹಾಲು ಒಕ್ಕೂಟಗಳ ಮನವಿಗೆ ಸ್ಪಂದಿಸಿ ಆ. 1ರಿಂದ ಹಾಲಿನ ದರದಲ್ಲಿ 3 ರೂ. ಹೆಚ್ಚಳಕ್ಕೆ ಅನುಮತಿಯನ್ನು ನೀಡಿತ್ತು. ಕೆಎಂಎಫ್ ಇದನ್ನೇ ನೆಪ ಮಾಡಿಕೊಂಡು ಈಗ ಮೊಸರು, ಮಜ್ಜಿಗೆ ದರವನ್ನೂ ಏರಿಸಿದೆ.
ಹೀಗಾಗಿ ಗ್ರಾಹಕರು 1 ಲೀ. ಮೊಸರಿಗೆ ಇನ್ನು ಮುಂದೆ ಹೆಚ್ಚುವರಿಯಾಗಿ 3 ರೂ. ಸೇರಿ ಒಟ್ಟು 50 ರೂ. ಹಾಗೂ 200 ಮಿ.ಲೀ. ಪೊಟ್ಟಣದ ಮಜ್ಜಿಗೆಗೆ 1 ರೂ. ಹೆಚ್ಚುವರಿಯಾಗಿ 9 ರೂ. ನೀಡಬೇಕಾಗುತ್ತದೆ.
ಹಿಂದೆ ನಂದಿನಿ ಪ್ಯಾಕೆಟ್ ಮೊಸರು ಪ್ರತೀ ಲೀ.ಗೆ 47 ರೂ., ಪ್ರತೀ 200 ಮಿ.ಲೀ. ಮಜ್ಜಿಗೆ 8 ರೂ.ಗಳಿಗೆ ಮಾರಾಟವಾಗುತ್ತಿತ್ತು.ಕೆಎಂಎಫ್ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಇಂದಿನಿಂದ 1 ಲೀ. ಟೋನ್ಡ್ ಹಾಲಿನ ಬೆಲೆ (ನೀಲಿ ಪೊಟ್ಟಣ) 42 ರೂ., ಟೋನ್ಡ್ ಹಾಲು (ಹೋಮೋಜಿನೈಸ್ಡ್) 43 ರೂ., ಹಸುವಿನ ಹಾಲು (ಹಸಿರು) 46 ರೂ. ಮತ್ತು ಶುಭಂ 48 ರೂ.ಗೆ ಹೆಚ್ಚಳವಾಗಿದೆ.