ಬೆಂಗಳೂರು, ಜು 31 (DaijiworldNews/HR): ಕೋವಿಡ್ ಕಾಲದಲ್ಲಿ ನಡೆದ ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತೇವೆ. ಮುಖ್ಯಮಂತ್ರಿಯವರ ಗಮನಕ್ಕೆ ಎಲ್ಲ ವಿಚಾರಗಳನ್ನು ತರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಕೋವಿಡ್ ಕಾಲದಲ್ಲಿ ನಡೆದ ಹಗರಣಗಳ ಕುರಿತು ಪಬ್ಲಿಕ್ ಅಕೌಂಟ್ಸ್ ಸಮಿತಿ ವರದಿಯಲ್ಲಿ ಸಾಕಷ್ಟು ಅಂಶಗಳಿದ್ದು, ಕೆಲವು ಉಪಕರಣಗಳನ್ನು ಹೆಚ್ಚು ದುಬಾರಿಗೆ ಬೆಲೆಗೆ ಖರೀದಿ ಮಾಡಿದ್ದಾರೆ ಎಂಬ ಆರೋಪವಿದೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ಇನ್ನು ಆಸ್ಪತ್ರೆಗಳಲ್ಲಿ ಶವಗಳ ಮಾಫಿಯಾ ನಡೆಯುತ್ತಿದೆ ಎಂಬ ಎನ್.ಆರ್ ರಮೇಶ್ ಆರೋಪಕ್ಕೆ ಪ್ರತಿಕ್ರಿಯಿದ ಅವರು, ಅವರು ಸಾಕಷ್ಟು ಆರೋಪ ಮಾಡುತ್ತಿರುತ್ತಾರೆ. ಅವರ ಬಳಿ ಮಾಹಿತಿ ಇದ್ದರೆ ಒದಗಿಸಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.