ಲಕ್ನೋ,ಜು 31 (DaijiworldNews/Ak):ಜ್ಞಾನವಾಪಿಯನ್ನು ಮಸೀದಿ ಎಂದು ಕರೆದರೆ ಅದು ತಪ್ಪಾಗುತ್ತದೆ, ಜ್ಞಾನವಾಪಿ ಮಸೀದಿ ಎಂದು ಕರೆಯುವುದಾದರೆ ಅದರೊಳಗೆ ತ್ರಿಶೂಲ ಹೇಗೆ ಬಂತು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದಾರೆ.
ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಆವರಣದ ವಿವಾದಿತ ವಾಜು ಖಾನಾ ಭಾಗವನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳ ಎಎಸ್ಐ ಸಮೀಕ್ಷೆಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮಸೀದಿ ಸಮಿತಿ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಸರ್ವೆ ನಿಲ್ಲಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೈಕೋರ್ಟ್ಗೆ ವರ್ಗಾಯಿಸಿತು. ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಎಎಸ್ಐ ಸಮೀಕ್ಷೆಯ ಕುರಿತು ನಿರ್ಧಾರ ಇನ್ನಷ್ಟೇ ಹೊರಬೀಳಲಿದೆ.
ಇದರ ಮಧ್ಯೆ ಈ ವಿಚಾರದಲ್ಲಿ ರಾಜಕೀಯವಗಿ ಬಿಸಿಬಿಸಿ ಚರ್ಚೆಯಗುತ್ತಿದೆ. ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ ಜನರು ಪ್ರತಿ ದೇವಾಲಯದಲ್ಲಿ ಬೌದ್ಧ ಮಠವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ.
ಇತ್ತ ಯುಪಿಎ ಸಿಎಂ ಯೋಗಿ , ಜ್ಞಾನವಾಪಿ ಒಳಗೆ ದೇವಾನುದೇವತೆಗಳಿವೆ, ಜ್ಞಾನವಾಪಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ಮಸೀದಿ ಒಳಗೆ ಹಿಂದೂಗಳು ಪ್ರತಿಮೆಯನ್ನು ಇಟ್ಟಿಲ್ಲ ಆದರೆ ಒಳಗೆ ತ್ರಿಶೂಲ, ಜೋತಿರ್ಲಿಂಗ ಇದೆ. ಹಾಗಾಗಿ ಜ್ಞಾನವಾಪಿ ಮಸೀದಿ ಎಂದು ಕರೆದರೆ ವಿವಾದವಾಗುತ್ತದೆ ಎಂದುಹೇಳಿದ್ದಾರೆ. ಮುಸ್ಲಿಂ ಸಮಾಜದಿಂದ ಚಾರಿತ್ರಿಕ ಪ್ರಮಾದ ನಡೆದಿದ್ದು, ಅದನ್ನು ಬಗೆಹರಿಸಲು ಮುಸ್ಲಿಂ ಸಮಾಜ ಮುಂದಾಗಬೇಕು. ಒಂದು ವೇಳೆ ಜ್ಞಾನವಾಪಿ ಮಸೀದಿಯಾಗಿದ್ದರೆ ಅಲ್ಲಿ ತ್ರಿಶೂಲ ಯಾಕೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ.