ಬೆಂಗಳೂರು, ಜು 31 (DaijiworldNews/HR): ಕರ್ನಾಟಕದಲ್ಲಿ ಪಿಂಕ್ ಐ, ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಮದ್ರಾಸ್ ಐ ರೋಗ ಹೆಚ್ಚಾಗಿ ಇರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.
ಇನ್ನು ಈ ರೋಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಕಣ್ಣು ಕೆಂಪಾಗುವುದು, ನೀರು ಸೋರುವಿಕೆ, ಅತಿಯಾದ ಕಣ್ಣೀರು, ಕಣ್ಣಿನಲ್ಲಿ ತುರಿಕೆ, ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು, ದೃಷ್ಟಿ ಮಂಜಾಗುವುದು, ಸೊಂಕಿತ ವ್ಯಕ್ತಿಗಳಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು, ತೀವ್ರ ಸೊಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು.
ಇನ್ನು ಸ್ಪಚ್ಫವಾದ ನೀರಿನಿಂದ ಕಣ್ಣುಗಳನ್ನ ಶುಚಿಗೊಳಿಸಬೇಕು, ಸೊಂಕು ಕಂಡು ಬಂದ ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು, ಸೊಂಕಿತ ವ್ಯಕ್ತಿಗಳು ಪೌಷ್ಟಿಕ ಆಹಾರ ಸೇವಿಸಬೇಕು, ಸೊಂಕಿತ ವ್ಯಕ್ತಿಗಳು ಶುಚಿಯಾದ ಕರವಸ್ತ್ರ ಬಳಸಬೇಕು.