ಶ್ರೀಹರಿಕೋಟಾ, ಜು 30 (DaijiworldNews/AK): ಇತ್ತೀಚಿಗಷ್ಟೆ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೆಗ್ಗಳಿಕೆಗೆ ಪಾತ್ರವಾಯಿತ್ತು. ಇದೀಗ ಮತ್ತೆ ಇಸ್ರೋ ಸಿಂಗಾಪುರದ ಏಳು ಉಪಗ್ರಹಗಳನ್ನು ಪಿಎಸ್ಎಲ್ವಿ- ಸಿ56 ರಾಕೆಟ್ ಮೂಲಕ ಇಂದು ಬೆಳಿಗ್ಗೆ 6.30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.
ಗಗನಕ್ಕೆ ಹಾರಿದ ಏಳು ಉಪಗ್ರಹಗಳಲ್ಲಿ ಇಸ್ರೇಲ್ ವಿಜ್ಞಾನಿಗಳು ಸಿದ್ಧಪಡಿಸಿರುವ ಡಿಎಸ್-ಸಿಂಥೆಟಿಕ್ ಅಪೆರ್ಚರ್ ಏರೋಸ್ಪೇಸ್ ಎಂಬ ಉಪಗ್ರಹ 360 ಕೆ.ಜಿ ತೂಕವಿದೆ. ಈ ಉಪಗ್ರಹಗಳು ಎಂತಹ ಹವಾಮಾನವಿದ್ದಾಗಲೂ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸಿಂಗಾಪುರ ರಕ್ಷಣಾ ಇಲಾಖೆ ತಯಾರಿಸಿರುವ ಮೂರು ಉಪಗ್ರಹಗಳು ಆಕಾಶಕ್ಕೆ ಹಾರಿವೆ. ಇದರಲ್ಲಿ ಸ್ವಯಂಚಾಲಿತ ಕಾರ್ ಚಾಲನೆಗೆ ಸಹಾಯ ಒದಗಿಸುವ ಉಪಗ್ರಹಗವಿದೆ.
ಇನ್ನು ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಯೋಜನೆಯಡಿ ಈ ಉಪಗ್ರಹಗಳು ಉಡಾವಣೆಯಾಗಿದ್ದು, ಈ ಯೋಜನೆಯಡಿ ಖಾಸಗಿಯವರಿಗೂ ಉಪಗ್ರಹ ಉಡಾವಣೆಗೆ ಅವಕಾಶ ನೀಡಲಾಗಿದೆ. ವೆಲೊಕ್ಸ್-ಎಮ್, ಆರ್ಕೇಡ್ ಅಟ್ಮಾಸ್ಫಿಯರಿಕ್ ಕಪ್ಲಿಂಗ್ ಆಂಡ್ ಡೈನಾಮಿಕ್ಸ್ ಎಕ್ಸಪ್ಲೋರರ್ , ಸ್ಕೂಬ್-2, ಗೆಲೇಸಿಯ-2, ಒಆರ್ಬಿ12-ಸ್ಟ್ರೈಡರ್, ನೂಲಯನ್ ಎಂಬ ಹೆಸರಿನ ಉಪಗ್ರಹಗಳನ್ನು ಪಿಎಸ್ಎಲ್ವಿ- ಸಿ56 ರಾಕೆಟ್ ಹೊತ್ತೊಯ್ದಿದೆ.