ಬೆಂಗಳೂರು, ಜು 28 (DaijiworldNews/MS): ಸರ್ಕಾರವು ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಒಂದೇ ದಿನ 46 ತಹಸೀಲ್ದಾರ್ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಗೆ ಸೇರಿದ ತಹಸೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ಅಧಿಕಾರಿಗಳನ್ನುಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಒಂದೇ ದಿನ 43 ತಾಲೂಕಿನ ತಹಸೀಲ್ದಾರ್ಗಳನ್ನು ಎತ್ತಂಗಡಿ ಮಾಡಿರುವುದು ಗಮನಾರ್ಹ.