ಬೆಂಗಳೂರು, ಜು 28 (DaijiworldNews/HR): ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕ ಹೆಸರಲ್ಲಿ ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿಶಾ ಹದಿನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಆಕೆಯ ವಿರುದ್ದ ಸಾಲು-ಸಾಲು ದೂರುಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುತ್ತಿದ್ದು ಆಕೆಯನ್ನು ಬಂಧಿಸಲಾಗಿತ್ತಿ.
ಇನ್ನು ನಿಶಾ ವಿರುದ್ದವಾಟ್ಸಪ್ ಹಾಗೂ ನೇರವಾಗಿ ಠಾಣೆಯಲ್ಲಿ ದಾಖಲಾದ ದೂರುಗಳು ಸೇರಿ 130ಕ್ಕೂ ಹೆಚ್ಚು ಜನರಿಂದ ಕಂಪ್ಲೇಟ್ಗಳು ಬಂದಿದ್ದು, ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಅಂತಾ ಹೇಳಲಾಗುತ್ತಿದೆ.