ಹಾವೇರಿ, ಜು 28 (DaijiworldNews/HR): ಹೆಣ್ಣುಮಕ್ಕಳ ವಿಚಾರದಲ್ಲಿ ಗೃಹ ಸಚಿವರು ಹಗುರವಾಗಿ ಮಾತನಾಡಿದ್ದು, ಇದರಿಂದ ಇಡೀ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಉಡುಪಿಯ ವಿಡಿಯೋ ವಿಚಾರದ ಕುರಿತು ಮಾತನಾಡಿದ ಅವರು, ಸರ್ಕಾರಕ್ಕೆ ನಮ್ಮ ಹೆಣ್ಣುಮಕ್ಕಳ ಬಗ್ಗೆ ಏನು ಗೌರವವಿದೆ. ತನಿಖೆಗೂ ಮೊದಲೇ ಏನೂ ಆಗಿಲ್ಲ ಅಂದ್ರೆ ಪೊಲೀಸರು ಪ್ರಕರಣವನ್ನ ಮುಚ್ಚಿ ಹಾಕುತ್ತಾರೆ. ಪ್ರಕರಣದಲ್ಲಿ ಏನು ಇಲ್ಲಾ ಅಂದ್ರೆ, ವಾರ ಬಿಟ್ಟು ಎಫ್ಐಆರ್ ಯಾಕೆ ಹಾಕಿದ್ರು? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿ ಪ್ರಕರಣ ಬೇರೆ. ಹೋರಾಟಗಾರರ ಪ್ರಕರಣಗಳು ಬೇರೆ. ಓಲೈಕೆ ರಾಜಕಾರಣಕ್ಕಾಗಿ ದಂಗೆಕೋರರನ್ನ ಕೈಬಿಡುತ್ತೀರಿ ಅಂದರೆ ಸರ್ಕಾರ ಯಾರ ಪರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.