ನವದೆಹಲಿ,ಜು 25 (DaijiworldNews/MS): ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಗಗನನೌಕೆ ಇಂದು ಭೂಮಿ ಕೊನೆಯ ಕಕ್ಷೆಯನ್ನು ಪ್ರವೇಶಿಸಲಿದೆ. ಮಧ್ಯಾಹ್ನ 2-3 ಗಂಟೆಗೆ 5ನೇ ಅರ್ಥ್-bound perigee firing ಪೂರ್ಣಗೊಳ್ಳಲಿದ್ದು ನಂತರ ಜು.31ರ ರಾತ್ರಿ ಭೂಮಿ ಕಕ್ಷೆಯನ್ನು ತೊರೆದು ನೌಕೆ ಚಂದ್ರನ ಕಡೆಗೆ ಚಲಿಸುತ್ತದೆ.
ಪ್ರಸ್ತುತ, ಗಗನನೌಕೆ ಭೂಮಿಯಿಂದ 71,351 ಕಿಮೀ x 233 ಕಿಮೀ ದೂರದ ಕಕ್ಷೆಯಲ್ಲಿದೆ ಎಂದು ಇಸ್ರೋ ಹೇಳಿದೆ.ಬಳಿಕ ಚಂದ್ರನಿಗೆ 5 ಸುತ್ತುಗಳನ್ನು ಹಾಕಿ ಆ.23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುತ್ತದೆ.
ಇದು ಈ ಕಾರ್ಯಾಚರಣೆಯ ಅತ್ಯಂತ ನಿರ್ಣಾಯಕ ಹಂತವಾಗಿದೆ. ಲ್ಯಾಂಡರ್ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್ ಮಾಡಿದರೆ, ಭಾರತ ಆ ಸಾಧನೆ ಮಾಡಿದ ಮೊದಲ ದೇಶವಾಗಲಿದೆ.