ನವದೆಹಲಿ, ಜು 25 (DaijiworldNews/AK): 2023ರ ಯುಜಿಸಿ ನೆಟ್ ಫಲಿತಾಂಶವನ್ನು ಇಂದು ರಾತ್ರಿ ಜುಲೈ 25 ರಂದು ಪ್ರಕಟಿಸಲಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಹಿರಿಯ ಅಧಿಕಾರಿ ತಿಳಿಸಿದ್ದಾರೆ.
UGC NET ಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ugcnet.nta.nic.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಫಲಿತಾಂಶ ಪ್ರಕಟವಾದ ಬಳಿಕ ಯುಜಿಸಿ ನೆಟ್ 2023 ಸ್ಕೋರ್ಕಾರ್ಡ್ ಅಧಿಕೃತ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿರುತ್ತದೆ. ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಪಾಸ್ವರ್ಡ್ ಅನ್ನು ಬಳಸಿ ಯುಜಿಸಿ ನೆಟ್ 2023 ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ..
ಯುಜಿಸಿ ನೆಟ್ ಒಂದನೇ ಹಂತದ ಪರೀಕ್ಷೆಯನ್ನು ಜೂನ್ 13 ರಿಂದ 17 ರವರೆಗೆ ಮತ್ತು ಎರಡನೇ ಹಂತದ ಪರೀಕ್ಷೆಯನ್ನು ಜೂನ್ 19 ರಿಂದ 22 ರವರೆಗೆ ನಡೆಸಿತು.
ಜುಲೈ 6 ರಂದು ಯುಜಿಸಿ ನೆಟ್ ಉತ್ತರದ ಕೀ ಬಿಡುಗಡೆ ಮಾಡಲಾಗಿತ್ತು, ಜುಲೈ 8 ರವರೆಗೆ ಅಭ್ಯರ್ಥಿಗಳಿಗೆ ಉತ್ತರದ ಕೀಯ ಮೇಲೆ ಆಕ್ಷೇಪಣೆಗಳನ್ನು ಸಲ್ಲಿಸಲು ಆಯ್ಕೆಗಳನ್ನು ಒದಗಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.