ಮುಂಬೈ, ಜು 23 (DaijiworldNews/MS): ಮಹಾರಾಷ್ಟ್ರದ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎನ್ ಸಿಪಿ ಶಾಸಕ (ಅಜಿತ್ ಬಣ) ಅಮೋಲ್ ಮಿಟ್ಕರಿ ಟ್ವಿಟರ್ನಲ್ಲಿ ʻನಾನು ಅಜಿತ್ ಅನಂತರಾವ್ ಪವಾರ್... ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರʼ ಎಂದು ಬರೆದುಕೊಂಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಎನ್ಸಿಪಿ ವಕ್ತಾರ ಶಾಸಕ ಅಮೋಲ್ ಮಿಟ್ಕರಿ ಅವರು ಅಜಿತ್ ಪವಾರ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದು, ಅಜಿತ್ ಪವಾರ್ ಅವರ ರಾಜಕೀಯದಲ್ಲಿ ಕೆಲಸ ಮಾಡುವ ಶೈಲಿ, ಅವರ ನಿಷ್ಠುರತೆ ಮತ್ತು ಅವರ ಕಾರ್ಯಶೈಲಿಯನ್ನು ಅದರ ಮೂಲಕ ತೋರಿಸಲಾಗಿದೆ.
ಇದಲ್ಲದೇ ಈ ವಿಡಿಯೋದಲ್ಲಿ ರಾಜ್ಯದಲ್ಲಿ ಶೀಘ್ರದಲ್ಲೇ ಅಜಿತ್ ಹಬ್ಬ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಅಜಿತ್ ಬಣದ ಶಾಸಕರಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನ ನೀಡಿರುವ ಬಗ್ಗೆ ಈಗಾಗಲೇ ಶಿಂಧೆ ಬಣ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಅಮೋಲ್ ಈ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.