ಬೆಂಗಳೂರು, ಜು 22(DaijiworldNews/AK):ಸರಕಾರ ನಂದಿನಿ ಹಾಲಿನ ದರ 3 ರೂ ಗೆ ಏರಿಕೆ ಮಾಡಿರುವ ಹಿನ್ನಲೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸರ್ಕಾರ ಹೀಗೆ ಬೆಲೆ ಹೆಚ್ಚಳ ಮಾಡುತ್ತಿದ್ದರೆ ಮಧ್ಯಮವರ್ಗದ ಜನರು ಜೀವನ ಮಾಡುವುದು ಹೇಗೆ ಎಂದು ಸರಕಾರಕ್ಕೆ ಪ್ರಶ್ನಿಸಿದ್ದಾರೆ. ಒಂದು ಕಡೆ ಸರಕಾರ ಕರೆಂಟ್, ಬಸ್ ಪ್ರಯಾಣ ಅಂತಾ ಉಚಿತ ಕೊಡುತ್ತಿದೆ. ಇನ್ನೊಂದು ಕಡೆ ಎಲ್ಲ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನರ ಕೈಯಿಂದಲೇ ಕಿತ್ತುಕೊಳ್ಳುತ್ತಿದೆ ಎಂದು ಸರಕಾರದ ನಡೆ ಬಗ್ಗೆ ಕಿಡಿಕಾರಿದ್ದಾರೆ.
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಹಾಲಿನ ಬೆಲೆ ಹೆಚ್ಚಳದ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಬೇಡಿ. ಅಗತ್ಯವಾಗಿ ಹಾಲು ಬೇಕು. ಬೆಲೆ ಹೆಚ್ಚಾದ್ರೆ ಏನು ಮಾಡೋದು. ಬೇಕಾದರೆ ಮದ್ಯದ ಬೆಲೆ ಇನ್ನು ಹೆಚ್ಚಳ ಮಾಡಿ. ಕೊನೆಗೆ ಕುಡಿಯೋದನ್ನ ಆದ್ರೂ ಬಿಡ್ತಾರೆ. ಆದ್ರೆ, ಹಾಲಿನ ಬೆಲೆ ಮಾತ್ರ ಹೆಚ್ಚಳ ಮಾಡಬೇಡಿ ಎಂದು ಜನರು ಮನದ ನೋವುನ್ನ ಹೊರ ಹಾಕಿದ್ದಾರೆ.
ಆರ್ಥಿಕ ನಷ್ಟದ ಕಾರಣ ಹೇಳಿ ಕೆಎಂಎಫ್ ಹಾಲಿನ ದರವನ್ನ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತು. ಆದರೆ , ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದ್ದು, ಆಗಸ್ಟ್ 1 ರಿಂದಲೇ ರಾಜ್ಯದಲ್ಲೆ ಹೊಸ ದರ ಜಾರಿಯಾಗಲಿದೆ.