ಬೆಂಗಳೂರು,ಏ03(AZM):ಮುಖ್ಯಮಂತ್ರಿ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ ಎನ್ನುವ ಹೇಳಿಕೆಯ ಬೆನ್ನಲ್ಲೇ ಸಿಟಿ ರವಿಯವರು ಕುಮಾರಸ್ವಾಮಿಯವರಿಗೆ ಟೈಮ್ ಬಾಂಬ್ ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ನೆಗೆದು ಬೀಳ್ತಾರೆ ಎಂದು ನಾನು ಹೇಳಲ್ಲ, ನಾನು ಹಾಗೆ ಬಯಸೋದು ಇಲ್ಲ, ಆದರೆ ಕುಮಾರಸ್ವಾಮಿಯವರಿಗೆ ಟೈಬಾಂಬ್ ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿಯವರಿಗೆ ಟೈಬಾಂಬ್ ಫಿಕ್ಸ್ ಮಾಡಿದ್ದು ಬೇರೆ ಯಾರೂ ಅಲ್ಲ, ಸಿದ್ದರಾಮಯ್ಯನವರೇ. ಅವರೇ ಡೆಡ್ ಲೈನ್ ಕೊಟ್ಟಿದ್ದಾರೆ ಮೇ 23 ಕ್ಕೆ ಡೆಡ್ ಲೈನ್ ಫಿಕ್ಸ್ ಆಗಿದೆ ಎಂದು ಸಿಟಿ ರವಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.