ಮೈಸೂರು, ಜು 19 (DaijiworldNews/MS): ಕಳೆದ ಬಾರಿ ಗರ್ಭಿಣಿ ಆನೆಯನ್ನು ದಸರಾ ತಾಲೀಮಿಗೆ ಬಳಸಿ ಮುಜುಗರಕ್ಕೆ ಒಳಗಾಗಿದ್ದ ಅರಣ್ಯ ಇಲಾಖೆ ಈ ಬಾರಿ ಎಚ್ಚೆತ್ತುಕೊಂಡಿದ್ದು, ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಮುಂದಾಗಿದೆ.
ಮೈಸೂರು ದಸರಾ ಹಬ್ಬಕ್ಕೆ ತಯಾರಿ ಆರಂಭವಾಗಿದ್ದು, ಹೀಗಾಗಿ ಆನೆಗಳ ಕ್ಯಾಂಪ್ ನಲ್ಲಿ ಪ್ರೆಗ್ನೆನ್ಸಿ ಪರೀಕ್ಷೆ ಬಳಿಕ ಕರೆದೊಯ್ಯಲು ನಿರ್ಧರಿಸಿದೆ.
ಕಳೆದ ಬಾರಿ ರಾಮಾಪುರ ಕ್ಯಾಂಪ್ ನ ಲಕ್ಷ್ಮೀ ಎಂಬ ಆನೆ ಮರಿಗೆ ಜನ್ಮ ನೀಡಿತ್ತು. ಈ ತಿಂಗಳಾಂತ್ಯಕ್ಕೆ ಆನೆಗಳ ಪಟ್ಟಿ ಸಿದ್ಧವಾಗಲಿದ್ದು, 14 ಆನೆಗಳನ್ನು ದಸರಾಗೆ ಕರೆ ತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಈ ಬಾರಿ ಅರ್ಜುನ ಹಾಗೂ ಗೋಪಾಲಸ್ವಾಮಿ ಆನೆಗಳು ದಸರಾದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಅರ್ಜುನ ಆನೆಗೆ ವಯಸ್ಸಾಗಿರುವ ಕಾರಣ ದಸರಾದಲ್ಲಿ ಭಾಗವಹಿಸುತ್ತಿಲ್ಲ. ಇನ್ನು ಗೋಪಾಲಸ್ವಾಮಿ ಆನೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈ ಬಾರಿ ಜಂಬೂಸವಾರಿ ನಡೆಯಲಿದೆ.