ಬೆಂಗಳೂರು, ಜು 17 (DaijiworldNews/AK): ಕಳೆದ ಚುನಾವಣೆಯಲ್ಲಿ ಕೆಲ ಪ್ರಾದೇಶಿಕ ಪಕ್ಷಗಳು ತನ್ನ ನಿಲುವು ಏನು ಎಂಬುದನ್ನು ಸಾಬೀತು ಮಾಡಿವೆ. ಜಾತ್ಯತೀತತೆ ಮೇಲೆ ನಂಬಿಕೆ ಇರುವವರು ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜೆಡಿಎಸ್ಗೆ ವಿಪಕ್ಷಗಳ ಸಭೆಯಲ್ಲಿ ಯಾಕೆ ಆಹ್ವಾನ ಇರಲಿಲ್ಲ ಎಂಬುದುಕ್ಕೆ ಪ್ರತಿಕ್ರಿಯಿಸಿ, ಯಾರು ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದ್ದಾರೆ ಅವರು ಬರುತ್ತಾರೆ. ಆಹ್ವಾನ ಕೊಡುವ ಅಗತ್ಯವೇ ಇಲ್ಲ. ಅವರೇ ಭಾಗಿಯಾಗ್ತಾರೆ. ಕಳೆದ ಬಾರಿ ಜೆಡಿಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಜಾತ್ಯತೀತತೆ ಮೇಲೆ ನಂಬಿಕೆ ಇರುವವರು ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಜೂನ್ 23 ರಂದು ಪಾಟ್ನಾದಲ್ಲಿ ಯಶಸ್ವಿ ಸಭೆ ನಡೆದಿತ್ತು, ಈ ಸಭೆ ಅದರ ಮುಂದುವರಿದ ಭಾಗವಷ್ಟೇ. 26 ರಾಜಕೀಯ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ವೇದಿಕಯಲ್ಲಿ ಸೇರಲಿದ್ದೇವೆ. ಕೇಂದ್ರ ಸರ್ಕಾರ ಸೇಡಿನ ನಡೆ ರಾಹುಲ್ ಗಾಂಧಿ ಅವರನ್ನ ಸಂಸತ್ ಸ್ಥಾನದಿಂದ ವಜಾ ಮಾಡಲಾಗಿದೆ. ಮಣಿಪುರದಲ್ಲಿ ಜನ ಸಾಮಾನ್ಯರು ಕಷ್ಟದಲ್ಲಿ ಸಿಲುಕಿದರು ಕೇಂದ್ರ ಗಮನ ಹರಿಸಲಿಲ್ಲ. ಈ ಸಭೆಯಲ್ಲಿ ಭವಿಷ್ಯದ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ. ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಬಗ್ಗೆಯು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.