ಬೆಂಗಳೂರು, ಜು 16 (DaijiworldNews/MS): ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್ ತನ್ನ ನೆಲೆ ಕಂಡುಕೊಳ್ಲಲು ರಾಜಕೀಯ ಸೈದಾಂತಿಕ ವಿರೋಧಿಯಾಗಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಜತೆ ಕೈ ಜೋಡಿಸಲು ಚಿಂತನೆ ನಡೆಸುತ್ತಿದೆ ಎಂಬ ಚಿಂತನೆಯ ಬೆನ್ನಲ್ಲೇ , "ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟದ್ದು" ಎಂದು ಬಿಜೆಪಿ ನಾಯಕ, ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರ ವರಿಷ್ಠರಿಗೆ ಬಿಟ್ಟದ್ದು. ನಮ್ಮ ವರಿಷ್ಠರು ಮತ್ತು ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ಈಗಾಗಲೇ ಹೆಚ್ಡಿಕೆ ಕೆಲವೊಂದಿಷ್ಟು ಭಾವನೆ ವ್ಯಕ್ತಪಡಿಸಿದ್ದಾರೆ. ಮಾತುಕತೆ ಫಲಶೃತಿ ಆಧಾರದ ಮೇಲೆ ರಾಜಕೀಯ ಬೆಳವಣಿಗೆಯಾಗಲಿದ್ದು, ಜುಲೈ 18ರ ಬಳಿಕ ವಿಪಕ್ಷ ನಾಯಕರ ಘೋಷಣೆ ಆಗಬಹುದು ಎಂದರು.
ಇನ್ನು ಜೆಡಿಎಸ್, ಬಿಜೆಪಿ ಮೈತ್ರಿ ಬಗ್ಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ - ಜೆಡಿಎಸ್ ಮದ್ಯೆ ಹೊಂದಣಿಕೆಯಾಗಬೇಕು ಎಂಬುವುದು ಒಂದು ವರ್ಗದ ಆಶಯ ಅದು ಭಾವನೆಯ ಹಂತದಲ್ಲಿಯೇ ಇದೆ ಎಂದಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ.