ಬೆಂಗಳೂರು, ಜು 15 (DaijiworldNews/MS): ಟೊಮೆಟೊ ದರ ಗಗನಕ್ಕೇರಿರುವ ಬೆನ್ನಲ್ಲೇ ಇದೀಗ ಹುಣಸೆ ಹುಳಿ ಬೆಲೆಯೂ ಏಕಾಏಕಿ ಏರಿಕೆಯಾಗುತ್ತಿದೆ. ನೂರರ ಗಡಿಯಲ್ಲಿದ್ದ ಹುಣಸೆ ಬೆಲೆ ಇದೀಗ 200ರ ಗಡಿ ತಲುಪಿದೆ.
ವರದಿಗಳ ಪ್ರಕಾರ, ಹುಳಿ ರುಚಿಯನ್ನು ಹೆಚ್ಚು ಮಾಡುವುದಕ್ಕೆ ಈಗ ಬಹುತೇಕರು ಟೊಮೆಟೊ ಬದಲಿಗೆ ಹುಣಸೆಯನ್ನೇ ಜಾಸ್ತಿ ಬಳಸುತ್ತಿರುವುದರಿಂದ ಅದಕ್ಕೂ ಬೇಡಿಕೆ ಹೆಚ್ಚಾಗಿದೆ.
ಒಂದು ವಾರದಿಂದೀಚೆಗೆ ಕೆಜಿಗೆ 90 ರೂ. ಇದ್ದ ಹುಣಸೆ ಬೆಲೆ ಈಗ 140ರಿಂದ 150 ರೂ.ಗೆ ಮಾರಾಟವಾಗುವ ಮೂಲಕ 50 ರೂ. ಹೆಚ್ಚಳವಾಗಿದೆ. ಇನ್ನು ಅತುಅತ್ತಮ ಗುಣಮಟ್ಟದ ಹುಣಸೆ ದರ 200ರಿಂದ 220 ರೂ ತಲುಪಿದೆ. ಇದರಿಂದ ದಿನನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳು ಒಂದೊಂದಾಗಿ ಜನಸಾಮಾನ್ಯರ ಕೈಗೆಟಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ