ಬೆಂಗಳೂರು , ಜು 15 (DaijiworldNews/AK): ಲಂಚ ಪಡೆಯುತ್ತಿದ್ದ ಫುಡ್ ಇನ್ಸ್ಪೆಕ್ಟರ್ ಮಹಂತೇಗೌಡ ನ್ನು ಲೋಕಾಯುಕ್ತ ಅಧಿಕಾರಿಗಳು ಸುಮಾರು 15 ಕಿ.ಮೀ ನಷ್ಟು ದೂರ ಹಿಂಬಾಲಿಸಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ನಡೆದಿದೆ.
ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಆಫೀಸ್ನ ಫುಡ್ ಇನ್ಸ್ಪೆಕ್ಟರ್ ಮಹಂತೇಗೌಡ ಬಳಿ ರಂಗದಾಮಯ್ಯ ಅವರು ವ್ಯಾಪರದ ಪರವಾನಗಿ ಮಾಡಿಸಲು ತೆರಳಿದ್ದರು. ಈ ವೇಳೆ ಅಧಿಕಾರಿ 1 ಲಕ್ಷ ರೂ. ಹಣವನ್ನು ಲಂಚ ನೀಡುವಂತೆ ಕೇಳಿದರು. 12000 ಮುಂಗಡವಾಗಿ ಹಣ ಪಡೆದಿದ್ದ ಮಹಾಂತೇಶ್, ಮತ್ತೆ 43 ಸಾವಿರ ರೂ. ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ಟ್ರ್ಯಾಪ್ ಮಾಡಿದ್ದಾರೆ. ಹಣ ಪಡೆಯುವ ವೇಳೆ ಟ್ರ್ಯಾಪ್ ಎಂದು ತಿಳಿದು ಪರಾರಿಯಾಗಲು ಮಹಂತೇಗೌಡ ಪ್ರಯತ್ನಿಸಿದ್ದಾರೆ. ಅಲ್ಲದೇ ಲೋಕಾಯುಕ್ತ ಅಧಿಕಾರಿಗಕಳ ಮೇಲೆ ಕಾರ್ ಹತ್ತಿಸಲು ಯತ್ನಿಸಿದ್ದಾನೆ. ಹಣ ಪಡೆದು ಸುಮಾರು 15 ಕಿ.ಮೀ ತೆರಳಿದ್ದಾರೆ. ಆದರೆ ಬೆನ್ನಟ್ಟಿದ ಅಧಿಕಾರಿಗಳು ಮಹಂತೇಗೌಡನನ್ನು ವಶಕ್ಕೆ ಪಡೆಯಲಾಗಿದೆ.
ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವುದು, ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನಲೆ, ಹಲ್ಲೆ ಮತ್ತು ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆದ ಆರೋಪದ ಮೇಲೆ ಅಧಿಕಾರಿಯ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.