ಆಂಧ್ರಪ್ರದೇಶ, ಜು 14 (DaijiworldNews/HR): ಟೊಮೆಟೋ ಬೆಲೆ ಗನಗಕ್ಕೇರುತ್ತಿರುವುದರಿಂದ ಅನೇಕ ಅವಘಢಗಳು ನಡೆಯುತ್ತಿದ್ದು, ಇದೀಗ ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ದರೋಡೆಕೋರರು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.
ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಮೃತ ವ್ಯಕ್ತಿ.
ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತ ವಾಪಸ್ ಆಗುತ್ತಿದ್ದದ್ದಗ ಬೈಕ್ ಅನ್ನು ಅಡ್ಡಗಟ್ಟಿದ ದರೋಡೆಕೋರರು ಕೃತ್ಯ ಎಸಗಿದ್ದಾರೆ.
ಇನ್ನು ಜುಲೈ ಮೊದಲ ವಾರದಲ್ಲಿ ಬೆಲೆ ಏರಿಕೆಯಾಗುತ್ತಿದ್ದಾಗ ಸುಮಾರು 70 ಬಾಕ್ಸ್ ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದರು ಎಂದು ತಿಳಿದು ಬಂದಿದೆ.